Skip to main content

Hirekumbalagunte Halaswamiji 18th Jatra Mahotsava-2023|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 18ನೇ ಜಾತ್ರ ಮಹೋತ್ಸವ-2023

ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ
ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ,

|| ಶ್ರೀ ಗುರುಹಾಲಶಂಕರ ಪ್ರಸೀದಂತು ||

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 18ನೇ ವರ್ಷದ ಜಾತ್ರಾ ಮಹೋತ್ಸವದ

"ಆಹ್ವಾನ ಪತ್ರಿಕೆ”

ದಿನಾಂಕ:- 26-12-2023 ನೇ ಮಂಗಳವಾರ 
ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ
ದಿನಾಂಕ:- 27-12-2023 ನೇ ಬುಧವಾರ ಬೆಳಗ್ಗೆ
ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಭಿಷೇಕ: ಗ್ರಾಮದ ಸಕಲ ಸದ್ಧಕ್ತರಿಂದ ನೆರವೇರುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಗು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 28-12-2023 ನೇ ಗುರುವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಮಂಜುನಾಥ ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಬಿನ್ನ ಮತ್ತು ತೇಜಿಬಿನ್ನ ತದನಂತರ ಸಾಯಂಕಾಲ 4-00 ಗಂಟೆಗೆ

ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.

* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತನ ಗ್ರಾಮಗಳ ಸಮಸ್ತ ಸದ್ಧಕ್ತರಿಂದ ನೆರವೇರುವುದು.

* ಸರ್ವರಿಗೂ ಆದರದ ಸ್ವಾಗತ *

Comments

Popular posts from this blog

ವಿಶ್ವಾರಾಧ್ಯರು - ವಿಶಾಲ ವಿಶ್ವಕ್ಕೆ ಆರಾಧ್ಯರಾಗಲಿ! - ನಾಗರಾಜ್ ಜಿಎಂ

"ಪಂಚಾಕ್ಷರೀ...ಕುಂಟ-ಕುರುಡರ ಕುಬೇರನಪ್ಪಾ ನೀನು!! ಅವರ ದಾರಿಯ ಬೆಳಕಾಗು..ಸಾರ್ಥಕವಾಗಲಿ ನಿನ್ನ ಬದುಕು ಗವಾಯಿ" -  ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರಂತೆ ಆಗಾಗ! ಈ ಮಾತು, ನಮ್ಮ ಪ.ಪೂ.ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಶ್ರೀಗಳನ್ನು ನೋಡಿದಾಗ ನೆನಪಾಗಿಬಿಡುತ್ತದೆ. ಗವಾಯಿಗಳು ಕುಂಟ-ಕುರುಡರ ಕುಬೇರರಾದರೆ, ಈ 'ಮೌನ ಋಷಿ'ಗಳು ಆಡುವ ಮಕ್ಕಳಿಗೆ ಕುಬೇರರು!! ಅವರಿದ್ದೆಡೆ‌ ಮಕ್ಕಳ ಕಲರವ. ಅವರ ತೊಡೆಯ ಮೇಲೆ ಹಾಲುಗೂಸಿನ ಕಿಲಕಿಲದ ನಗು!! ಅವರಿದ್ದೆಡೆ ಶಾಂತಿಯ ಪಾರಿವಾಳಗಳು ಹಾರಾಡುತ್ತವೆ...ತುಂಟ ಗಿಳಿಗಳು ತೊದಲಾಡುತ್ತವೆ.ನವಿಲು ಗರಿಬಿಚ್ಚಿ ಕುಣಿಯುತ್ತದೆ. ಅಯ್ಯೋ...ಅವರು ಕೂತ ಕಡೆ ತಂಗಾಳಿಯೇ ತಲೆಬಾಗಿ ಬೀಸುತ್ತದೆ. In fact ಅವರೂ ಕೂಡ ಮಗುವಿನಂಥವರು.  ಇವರಿಗೆ ವಯಸ್ಸಾಗುವುದಿಲ್ಲ..ಅವರೆಂದಿಗೂ ಬಾಲ್ಯದ ಹಸುಳೆಯ ಮನಸ್ಸು ಹೊತ್ತೇ ಬದುಕುತ್ತಾರೇನೋ ಅನಿಸುತ್ತದೆ.ಅವರು ಯಾವತ್ತೂ ಕೋಪಿಸಿಕೊಂಡದ್ದು ನೋಡಿಲ್ಲ. ಈ ಜಮಾನದ ಜನರ ಮನಃಸ್ಥಿತಿಗಳ ಅದಃಪತನವನ್ನು ನೋಡಿ, ನಮ್ಮಂಥವರಿಗೆ ರೇಜಿಗೆ ಹುಟ್ಟುತ್ತದೆ..ಆದರೆ, ಅವರು ಅಂಥವರನೆಲ್ಲಾ ನಿರ್ಲಿಪ್ತರಾಗಿ ನೋಡುತ್ತಿರುತ್ತಾರೆ. ಯಾರನ್ನೂ ದೂಷಿಸಿಸಿದ್ದನ್ನು ನಾನು ಕೇಳಿಲ್ಲ. Even ತಮ್ಮ ಬಗ್ಗೆ ಮಾತಾಡಿದವರನ್ನೂ ಕೂಡ!! ಯಾವ ಜಾತಿ-ಧರ್ಮ,ಇದ್ದವ-ಇಲ್ಲದವ ಎಂಬ ಬೇಧ ಮಾಡದೆ ಎಲ್ಲರನ್ನೂ ಅದೇ ಮೃದು ಮಾತಿನಿಂದ ಸಂತೈಸುತ್ತಾರೆ.  ವಿಶ...

Hirekumbalagunte Halaswamiji 19th Jatra Mahotsava-2024|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 19ನೇ ಜಾತ್ರ ಮಹೋತ್ಸವ-2024

ದಿನಾಂಕ: 4-12-2024 ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಜಾತ್ರೆಗೆ ಆಹ್ವಾನ ನೀಡಿದರು. ದಿನಾಂಕ: 6-12-2024 ರಂದು ಶ್ರೀ ಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ:- 15-12-2024 ನೇ ಭಾನುವಾರ ಶ್ರೀಗುರು ಹಾಲಸ್ವಾಮಿಜೀಯ ಮಹಾಕಾರ್ತಿಕೋತ್ಸವ   ದಿನಾಂಕ: 16-12-2024 ನೇ ಸೋಮವಾರ ಬೆಳಗ್ಗೆ ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಾಭೀಷೇಕ: ಶ್ರೀ ಹೆಚ್.ಎಂ.ಗಂಗಾದಾಧರಯ್ಯ ಮತ್ತು ಶ್ರೀ ಹೆಚ್.ಎಂ.ಪ್ರಕಾಶ,ಭಾಗಳಿ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇದುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ:- 17-12-2024 ನೇ ಮಂಗಳವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಸತೀಶ್‌ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಜನ್ನ ಮತ್ತು ತೇಜಜನ್ನ. ತದನಂತರ ಸಾಯಂಕಾಲ 4-00 ಗಂಟೆಗೆ ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು. * ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್...

ಹಿರೇಕುಂಬಳಗುಂಟೆ ಹಾಲಸ್ವಾಮೀಜಿ ಜಾತ್ರಾ ಮಹೋತ್ಸವ 2018

ವಿಜಯ ಕರ್ನಾಟಕ ನ್ಯೂಸ್ ಪೇಪರ್ ವರದಿ ಹಿರೇಕುಂಬಳಗುಂಟಿ ಹಿರೇಕುಂಬಳಗುಂಟೆಯ ಈ ವರ್ಷದ ಹಾಲಪ್ಪಜ್ಜನ ಮುಳ್ಳುಗದ್ದುಗೆಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ತೀವ್ರ ಮಳೆ ಕೊರತೆಯಿದ್ದರೂ ಹಾಲೇಶನ ಕೃಪಾಕಟಾಕ್ಷದ ರಕ್ಷೆಯಿಂದ ಊರಿನ ರೈತರ ಬೆಳೆಗಳು ಅವರ ಕಣಗಳನ್ನು ಸೇರಿವೆ. ಜಾತ್ರೆಗೆ ಒಂದಷ್ಟು ದಾನಿಗಳು ನೆರವಿಗೆ ಬಂದದ್ದರಿಂದಾಗಿ ರೈತರು ನಿರಮ್ಮುಳವಾಗಿದ್ದಾರೆ. ನಿಜ ; ಹಾಲಪ್ಪಜ್ಜನ ಜಾತ್ರೆಯು ಯಾರಿಗೂ ಹೊರೆಯಾಗದೆ, ಸಂಭ್ರಮವೊಂದಕ್ಕೆ ಹರಿಗೋಲಾಗಿದೆ! ಈ ವರ್ಷದ ಜಾತ್ರೆಯು ಒಂದಷ್ಟು ಕಾರಣಗಳಿಂದಾಗಿ ವಿಶಿಷ್ಟವಾಗಿದೆ. ಮೊದಲ ದಿನದ ದೀಪೋತ್ಸವದ ವೇಳೆಯಲ್ಲಿ ನೂರಾರು ಮಹಿಳೆಯರು ಮೂರು-ನಾಲ್ಕು ಗಂಟೆಗಳ ಕಾಲ ದೇವಸ್ಥಾನದ ಆವರಣದಲ್ಲಿ ಲಭ್ಯವಿದ್ದು ಅವರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು,ಅವರಿಗೂ ಒಂದಷ್ಟು ಬದುಕಿನ ಸಂಸ್ಕಾರ ಸಂದೇಶಗಳನ್ನು ತಲುಪಿಸಬೇಕೆಂಬ ಸದುದ್ದೇಶದಿಂದ ಇಬ್ಬರು ವಿಶಿಷ್ಟ ಸಾಧಕರಿಂದ ಭಾಷಣ-ಸಂವಾದ ಗೋಷ್ಠಿ ಏರ್ಪಡಿಸಿದ್ದೇವೆ. ಅವರಲ್ಲಿ ಒಬ್ಬರು, ಕುಮಾರಿ ಹಾರಿಕ Harika Manjunath ,ತುಂಬಾ ಚಿಕ್ಕ ವಯಸ್ಸಿನಲ್ಲೇ ರಾಜ್ಯಾದ್ಯಂತ ತನ್ನ ವಿಶಿಷ್ಟ ಮಾತುಗಾರಿಕೆಯಿಂದ ಪ್ರಸಿದ್ಧಳಾದ ಪುಟ್ಟ ಬಾಲೆ!  ಪ್ರಧಾನಿ ಮೋದಿಯವರಿಂದಲೂ ಪ್ರಶಂಸೆಗೊಳಗಾಗಿ,ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ರವರಿಗೂ ಪ್ರೀತಿಪಾತ್ರಳಾದ ಪುಟ್ಟ ಹುಡುಗಿ! ಬರೀ ಭಾಷಣದಲ್ಲಷ್ಟೇ ಅಲ್ಲ , ಈ ಪೋರಿಯು ಅನೇಕ ...