"ಹಿರೇಕುಂಬಳಗುಂಟೆ" ಯ ಬಗೆಗೆ ಒಂದು ಪುಟ್ಟ ಟಿಪ್ಪಣಿ "
(ವಿಕಿಪಿಡಿಯಾ ಗಾಗಿ ಸಿದ್ಧಪಡಿಸಿದ್ದು, ನಿಮಗಾಗಿ ಇಲ್ಲಿ ಹಂಚಿಕೊಂಡಿದ್ದೇನೆ)
ಜೀ,ಎಮ್, ನಾಗರಾಜ್ ಗೌಡ.
--------------------------------------------------------------------
ಹೈದರಾಬಾದ್ ಹಾಗೂ ಮೈಸೂರು ಸಂಸ್ಥಾನಗಳ ಗಡಿರೇಖೆಯಂಚಿನ ಗ್ರಾಮವಾದ "ಹಿರೇಕುಂಬಳಗುಂಟೆ" ಯ ಬಗ್ಗೆ ವಿಜಯನಗರದ ಪತನಾನಂತರದ ತುಂಡು ಪಾಳೇಗಾರರು ಆಳಿದ ಕಾಲಘಟ್ಟದಿಂದ ಇತಿಹಾಸದ ದಾಖಲೆಗಳು ಲಭ್ಯವಿವೆ.ಅದನ್ನು ಹೊರತು ಪಡಿಸಿದರೆ ಗ್ರಾಮಕ್ಕೆ ಸಂಬಂಧಿಸಿದ ಅಧಿಕೃತ ಐತಿಹಾಸಿಕ ಮಾಹಿತಿಗಳು ಅಲಭ್ಯ.
ಬ್ರಿಟಿಷ್ ಮದ್ರಾಸ್ ಪ್ರೆಸಿಡೆನ್ಸಿ ಅಧೀನದಲ್ಲಿ ಸಂಡೂರಿನ ಘೋರ್ಪಡೆಗಳ ಆಡಳಿತಕ್ಕೆ ಈ ಗ್ರಾಮ ಒಳಪಟ್ಟದ್ದಕ್ಕೆ ದಾಖಲೆಗಳಿವೆ.ಅಂದರೆ ಒಂದು ಕಾಲಘಟ್ಟದಲ್ಲಿ ಈ ಗ್ರಾಮವು ಮರಾಠಾ ಸಂಸ್ಥಾನದ ಶಿವಾಜಿಯ ಆಳ್ವಿಕೆಗೂ ಒಳಪಟ್ಟಿತ್ತು.
ಸ್ವತಂತ್ರ ಪೂರ್ವದಲ್ಲಿಯೇ ಇಲ್ಲಿ ಶಾಲೆಯು ಆರಂಭಗೊಂಡು ಇಡೀ ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹಳೆಯ ಶಾಲೆಗಳಲ್ಲೇ ಒಂದೆನಿಸಿದೆ.
ದಾವಣಗೆರೆ ಜಿಲ್ಲೆಯ ಶ್ರೀ ರಾಂಪುರ ಪುರವರ್ಗ ಮಠದ ಶ್ರೀ ಹಾಲಸ್ವಾಮಿಗಳು ೧೯೧೪ ರಲ್ಲೇ ಇಲ್ಲಿ ಗುರು ಗದ್ದುಗೆಯನ್ನು ಸ್ಥಾಪಿಸಿದ್ದರು.
ಭೌಗೋಳಿಕವಾಗಿ ಗ್ರಾಮದ ಉತ್ತರಕ್ಕೆ ನಿಂಬಳಗೆರೆ ಗ್ರಾಮ ವ್ಯಾಪ್ತಿಗೆ ಸೇರಿದ ಉಷ್ಣವಲಯದ ಕುರುಚಲು ಕಾಡುಗಳನ್ನು ಹೊಂದಿದ್ದರೂ ಗ್ರಾಮಕ್ಕೆ ಹೊಂದಿಕೊಂಡಂತೆ ಯಾವುದೇ ರೀತಿಯ ಕೆರೆ-ತೊರೆಗಳಂತಹ ನೀರಿನ ಸ್ಥಿರ ಮೂಲಗಳಿಲ್ಲದ ಬಯಲು ಹಳ್ಳಿಯಾಗಿದೆ.
ಇಲ್ಲಿನ ಮಣ್ಣುಗಳಲ್ಲಿ ಬಹುತೇಕ ಮಸಾರಿ,ಮರಳು ಮಿಶ್ರಿತ ಕೆಂಪು ಹಾಗೂ ಸ್ವಲ್ಪ ಪ್ರಮಾಣದ ಜೌಗು ಮಣ್ಣಿನ ಲಕ್ಷಣವುಳ್ಳ ಮಣ್ಣಿನ ಪ್ರಕಾರಗಳಿವೆ.
ಭಾರತ ಸರಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ "ಸ್ವಚ್ಛಭಾರತ ಯೋಜನೆ" ಗೆ ಮೂಲ ಪ್ರೇರಣೆಯಾದ "ನಿರ್ಮಲ ಕರ್ನಾಟ" ಯೋಜನೆಯ ರೂಪುರೇಷೆ ತಯಾರಿಸಿದ ಭಾರತೀಯ ಸಮಾಜಕಾರ್ಯದ ಪಿತಾಮಹರಾದ ಶ್ರೀ ಡಾ|| ಎಚ್.ಎಂ.ಮರುಳಸಿದ್ಶಯ್ಯನವರದ್ದು ಇದೇ ಊರು..ಹಾಗೂ ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಹಿ.ಮ.ನಾಗಯ್ಯನವರದ್ದೂ ಇದೇ ಊರು ಎಂಬ ಹೆಮ್ಮೆ ಈ ಹಳ್ಳಿಗಿದೆ.
ಈ ಗ್ರಾಮದ ಮಹಿಳೆಯರ,ಮಕ್ಕಳ,ಯುವಕರ ಸಾಮಾಜಿಕ ಸ್ಥಿತಿ,ಕೌಟುಂಬಿಕ ಸ್ಥಿತಿಗತಿಗಳ ಬಗ್ಗೆ ಸ್ವೀಡನ್ ದೇಶದ ಅಸ್ತರ್ ಸಂದ್ ವಿಶ್ವವಿದ್ಯಾಲಯ,ಮಿಡಲಟನ್ ವಿಶ್ವವಿದ್ಯಾಲಯಗಳಿಂದ ಕಾರ್ಯಕ್ಷೇತ್ರ ಸಮೇತ ಅಧ್ಯಯನಗಳಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡನೆಗೊಂಡಿವೆ.
ಜರ್ಮನ್ ದೇಶದ ವಿಶ್ವವಿದ್ಯಾಲಯವೊಂದರ ವಿಶ್ವಕೋಶದಲ್ಲಿ ಕಾಣಿಸಿಕೊಂಡ ಕರ್ನಾಟಕದ ಮೊದಲ ಗ್ರಾಮ ಇದಾಗಿದೆ.
ಇಲ್ಲಿನ ಜನರ ಮುಖ್ಯ ಖುಷ್ಕಿ ಬೆಳೆಗಳು ಶೇಂಗಾ,ರಾಗಿ,ಜೋಳ,ಗುರೆಳ್ಳು, ಇತ್ಯಾದಿ.
ಸೀಮಿತ ಅಂತರ್ಜಲ ಲಭ್ಯತೆಯಲ್ಲಿ ಅಲ್ಲಲ್ಲಿ ಕೊಳವೆಬಾವಿ ಆಶ್ರಯಿಸಿ ವೀಳ್ಯ ದ ತೋಟ,ಹಿಪ್ಪು ನೇರಳೆ ತಾಕುಗಳನ್ನು ಇಲ್ಲಿನ ಜನ ಹೊಂದಿದ್ದಾರೆ.
ಸುತ್ತಲಿನ ಹತ್ತಾರು ಗ್ರಾಮ ಗುಚ್ಛಗಳನ್ನೊಳಗೊಂಡ ಗ್ರಾಮ ಪಂಚಾಯತ್ ನ ಕೇಂದ್ರ ಸ್ಥಾನವೂ ಹಿರೇಕುಂಬಳಗುಂಟೆಯೇ ಆಗಿದೆ. ಕಿರಿಯ ಸಮುದಾಯ ಆರೋಗ್ಯ ಕೇಂದ್ರವಿದೆ..ಪಶು ಚಿಕಿತ್ಸಾ ಕೇಂದ್ರವೂ ಇದೆ.
ಶಿಕ್ಷಣಕ್ಕೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ,ಸರಕಾರಿ ಪ್ರೌಢ ಶಾಲೆಗಳಿದ್ದು ಎರಡು ಅಂಗನವಾಡಿಗಳಿವೆ.
ಗ್ರಾಮದ ಸುತ್ತಲಿನ ನಾಲ್ಕಾರು ಹಳ್ಳಿಗಳ ಮಕ್ಕಳೂ ಇದೇ ಶಾಲೆಗಳಲ್ಲಿಯೇ ಕಲಿಯುತ್ತಿದ್ದಾರೆ. ಸರಕಾರಿ ಪದವಿಪೂರ್ವ ಕಾಲೇಜೊಂದರ ತುರ್ತು ಅಗತ್ಯವಿರುವುದು ಗೋಚರವಾಗುತ್ತದೆ.
ತಾಲೂಕು ಕೇಂದ್ರ ಕೂಡ್ಲಿಗಿಯಿಂದ 21 ಕಿ.ಮೀ. ಹಾಗೂ ಜಿಲ್ಲಾಕೇಂದ್ರ ಬಳ್ಳಾರಿಯಿಂದ 93 ಕಿ.ಮೀ. ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 270 ಕಿ.ಮೀ.ಗಳ ದೂರದಲ್ಲಿದೆ. ಪ್ರಯಾಣಕ್ಕೆ ಬಸ್ ವ್ಯವಸ್ಥೆಯು ತಾಲೂಕ್,ಹೋಬಳಿ ಕೇಂದ್ರ ಹೊಸಹಳ್ಳಿಯಿಂದಲೂ ಹಾಗೂ ಪಕ್ಕದ ತಾಲೂಕಾದ ಜಗಲೂರಿನಿಂದಲೂ ಲಭ್ಯವಿದೆ.
ಗ್ರಾಮದಲ್ಲಿ ಅಂಚೆ ಇಲಾಖೆಯ ಶಾಖಾ ಕಛೇರಿಯೂ ಇದ್ದು ಇಬ್ಬರು ಸಿಬ್ಬಂದಿಯಿದ್ದಾರೆ. ಹಾಗೆಯೇ ಖಾಸಗಿ ದೂರಸಂಪರ್ಕ ಕಂಪನಿಯಾದ ಏರಟೆಲ್ ನ ಸಿಗ್ನಲ್ ಟವರ್ ಗ್ರಾಮದಲ್ಲಿದೆ..ಏರಟೆಲ್,ಐಡಿಯಾ,ಜಿಯೋ ಸಂಕೇತಗಳ ಲಭ್ಯತೆಯಿದೆ.
ಗ್ರಾಮದಲ್ಲಿ ಕುಡುಒಕ್ಕಲಿಗ ಸಮುದಾಯದ ಸಂಖ್ಯಾಬಾಹುಳ್ಯವಿದ್ದು ಪರಿಶಿಷ್ಟ ಜಾತಿ,ಪಂಗಡ,ಪಿಂಜಾರ,ಜಂಗಮ ಜಾತಿಗೆ ಸೇರಿದ ಜನರು ವಾಸವಾಗಿದ್ದಾರೆ.

It is a very good initiative. Swedish who visited Kumbalagunte to be uploaded. Books of h.m.Marulasiddaiah and hi ma nagaiah to be update
ReplyDelete