ಮಾನವ ಧರ್ಮಕ್ಕೆ ಜಯವಾಗಲಿ
ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ಸತ್ಯ ನಮ್ಮ ಆಚಾರ ಧರ್ಮ ನಮ್ಮ ಪ್ರಚಾರ
ಶಾಂತಿ ನಮ್ಮ ಸ್ವಭಾವ ಪ್ರೇಮ ನಮ್ಮ ಸ್ವರೂಪ,
|| ಶ್ರೀ ಗುರುಹಾಲಶಂಕರ ಪ್ರಸೀದಂತು ||
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 16ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ”
ದಿನಾಂಕ:- 28-12-2021 ನೇ ಮಂಗಳವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ
ದಿನಾಂಕ:- 29-12-2021 ನೇ ಬುಧವಾರ ಬೆಳಗ್ಗೆ
ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಭಿಷೇಕ: ಗ್ರಾಮದ ಸಕಲ ಸದ್ಧಕ್ತರಿಂದ ನೆರವೇರುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಗು ಗದ್ದುಗೆ ಮಹೋತ್ಸವ ನೆರವೇರುವುದು.
ದಿನಾಂಕ:- 30-12-2021 ನೇ ಗುರುವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ರವಿಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಬಿನ್ನ ಮತ್ತು ತೇಜಿಬಿನ್ನ ತದನಂತರ ಸಾಯಂಕಾಲ 4-00 ಗಂಟೆಗೆ
ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು.
* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತನ ಗ್ರಾಮಗಳ ಸಮಸ್ತ ಸದ್ಧಕ್ತರಿಂದ ನೆರವೇರುವುದು.
* ಭಕ್ತಾದಿಗಳಲ್ಲಿ ವಿನಂತಿಸುವುದೇನೆಂದರೆ ಮಾಸ್ಕ್ ಧರಿಸಿ
ಸಾಮಾಜಿಕ ಅಂತರವನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳಿ.
* ಸರ್ವರಿಗೂ ಆದರದ ಸ್ವಾಗತ *
www.facebook.com/amrutheshwarasri www.fb.com/mounarushi www.hirekumbalgunte.blogspot.com

ಈ ವರ್ಷದ "ಹಾಲಪ್ಪಜ್ಜನ ಜಾತ್ರೆ"ಯ ಮೊದಲ ದಿನದ ದೀಪೋತ್ಸವ-ಕಾರ್ತೀಕದ ಸಂದರ್ಭದಲ್ಲಿ ಆರೋಗ್ಯಕ್ಷೇತ್ರದಲ್ಲಿ ನಿಃಸ್ವಾರ್ಥದಿಂದ ಸೇವೆ ಸಲ್ಲಿಸಿದ ಆಲೂರು PHC ಯ ಡಾ||ಪ್ರಸನ್ನ ಕುಮಾರ್,ರವಿಯಣ್ಣ(FDA),ಕಲ್ಲೇಶಣ್ಣ(Lab Technician)ರಿಗೂ ಹಾಗೂ ಈ ಹಿಂದೆ ಹಲವಾರು ವರ್ಷಗಳ ಕಾಲ ಊರ ಮಗಳಂತೆ ಸೇವೆ ಸಲ್ಲಿಸಿದ್ದ ಪ್ರೀತಿಯ 'ಗುಂಡಮ್ಮಕ್ಕ'(ANM,ಶಿರಾ)ರಿಗೂ ಗುರು ರಕ್ಷೆಯ ಸತ್ಕಾರ ಮಾಡಲಾಗುತ್ತಿದೆ.
ಗುರು ರಕ್ಷಾ ಕಾರ್ಯಕ್ರಮದ ನಂತರ ಜನಪ್ರಿಯ ಹಾಸ್ಯ ಭಾಷಣಕಾರರಾದ ಕೋಗಳಿ ಕೊಟ್ರೇಶ್ & ತಂಡದವರ "ಹಾಸ್ಯ ರಸಾಯನ" ವು ಜನರನ್ನು ನಗಿಸುವ,ನಗಿಸುತ್ತಲೇ ಜೀವನ ಸಂದೇಶವನ್ನೂ ದಾಟಿಸಲಿದೆ.
'ಪುಸ್ತಕ ಮನೆ'ಯಲ್ಲಿ ಹೊಸದಾಗಿ 'ಕಂಪ್ಯೂಟರ್ ತರಬೇತಿ'ಕಾರ್ಯಕ್ರಮದ ಉದ್ಘಾಟನೆಯು ಮುಳ್ಳುಗದ್ದುಗೆಯ ದಿನದ ಬೆಳಿಗ್ಗೆ ನೆರವೇರಲಿದೆ.
ಈ ವರ್ಷದ ಅನ್ನ ದಾಸೋಹವು 'ಪುಸ್ತಕ ಮನೆ'ಯ ಆವರಣದಲ್ಲಿ ಡಾ||ಎಚ್.ಎಂ.ಮರುಳಸಿದ್ಧಯ್ಯ ಬಳಗದ ವತಿಯಿಂದ ಸಂಪನ್ನಗೊಳ್ಳಲಿದೆ.
ಮತ್ತೆ...ನೀವು ಬರೋದು ಮಾತ್ರವೇ ಬಾಕಿ ಇದೆ. ಪದೇ ಪದೇ ಕರೆಸಿಕೊಳ್ಳದೇ ಬಂದು ಬಿಡ್ರೆಲಾ..
ತೇರನ್ನೇನೋ ಎಳೆದು ನೆಲೆಗೆ ನಿಲ್ಲಿಸಲಾಗಿದೆ.ಅದು ಹುಟ್ಟು ಹಾಕಿದ ಮನಸ್ಸಿನ ತಲ್ಲಣದ ಮೆರವಣಿಗೆ ಮಾತ್ರ ಇನ್ನೂ ನಡೆಯುತ್ತಲೇ ಇದೆ!
"ಹಾಲಪ್ಪಜ್ಜನ ಜಾತ್ರೆ" ಯು ಸಂಸ್ಕೃತಿ,ಸಹಬಾಳ್ವೆ , ಸಮೈಕ್ಯತೆಗಳ ಸಂಭ್ರಮವಾಗಿತ್ತಾ? - ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಲಿಲ್ಲ.
ಎಳೆಯ ವಯಸ್ಸಿನ ಹುಡುಗರೆಲ್ಲಾ ಕುಡಿದು,ತೂರಾಡುತ್ತ ಕುಣಿದದ್ದು ಸಂಸ್ಕೃತಿಯಾ? ಎಲ್ಲಿ ನೋಡಿದರೂ ಬರೀ ಕುಡುಕರದ್ದೇ ಜಾತ್ರೆ!
ಜಾತಿ ವೈಷಮ್ಯದ ಹೊಗೆಯು ಆವಾಗವಾಗ ಎದ್ದು ಉರಿದದ್ದು ಅದೆಂಥಾ ಸಹಬಾಳ್ವೆ?
ಉಳ್ಳವರಿಗೊಂದು-ಇಲ್ಲದವರಿಗೊಂದು ಬಗೆವ ಈ ಜಾತ್ರೆಯಲ್ಲಿದ್ದದ್ದು ಅದೆಂಥಾ ಸಮೈಕ್ಯತೆ?
ಆರತಿ ಹಿಡಿದವರ ಸಾಲಲ್ಲಿ ಹಳೆಯದೊಂದು ಸೀರೆಯುಟ್ಟು ಮುದುಡಿ ಕುಳಿತಿದ್ದ ಆ ಬಡಬಾಲೆಯ ಕಣ್ಣನೋಟ...
ಗುಡಿಯೊಳಗೆ ಹೋಗಲಾಗದೆ,ಹೊರಗೆಯೇ ಕೈಮುಗಿದು ಕಣ್ಣಲ್ಲಿ ತೊಟ್ಟಿಕ್ಕಿದ ಕಂಬನಿ ಹನಿಗಳನ್ನೊರೆಸಿಕೊಂಡ ತಳಜಾತಿಯ ಆ ತಾಯಿಯೊಬ್ಬಳ ನಿಟ್ಟುಸಿರು...
ಬಳೆಯಂಗಡಿಯು ಮುಂದೆ ಬರಿಗೈಲಿ ಬಳೆಗಳೆಡೆ ನೋಡುತ್ತ ನಿಂತ ಆ ಸಣ್ಣ ಹುಡುಗಿಯೊಬ್ಬಳ ಎದೆಯ ಕುದಿ...
ದೇಹ-ಮನಸ್ಸುಗಳೆರಡೂ ದಣಿವು,ಜಿಗುಪ್ಸೆಗಳಿಂದ ಕದಡಿ ಹೋಗಿಬಿಟ್ಟಿದೆ.
I wouldn't let myself get into this again..No NOMORE .. NEVER! -
- ಜಿಎಂ ನಾಗರಾಜ್
ಹಿರೇಕುಂಬಳಗುಂಟೆ ಹಾಲಸ್ವಾಮಿ ರಥೋತ್ಸವ-ಮುಳ್ಳುಗದ್ದಿಗೆ ಉತ್ಸವ

Comments
Post a Comment