Skip to main content

Hirekumbalagunte Halaswamiji 20th Jatra Mahotsava-2025|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 20ನೇ ಜಾತ್ರ ಮಹೋತ್ಸವ-2025

ದಿನಾಂಕ: 20-11-2025 ಗುರುವಾರ ರಂದು 
ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಪೂಜ್ಯರಿಗೆ ಜಾತ್ರೆಗೆ ಭಿನ್ನ ಹಾಕಿದರು.

ದಿನಾಂಕ: 25-11-2025 ಮಂಗಳವಾರ ರಂದು ಶ್ರೀಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು.

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 20ನೇ ವರ್ಷದ ಜಾತ್ರಾ ಮಹೋತ್ಸವದ
"ಆಹ್ವಾನ ಪತ್ರಿಕೆ"

ದಿನಾಂಕ 04-12-2025 ನೇ ಗುರುವಾರ ಶ್ರೀಗುರು ಹಾಲಸ್ವಾಮಿಯ ಮಹಾಕಾರ್ತಿಕೋತ್ಸವ 
ದಿನಾಂಕ 05-12-2025 ನೇ ಶುಕ್ರವಾರ ಬೆಳಿಗ್ಗೆ ಶ್ರೀಗುರು ಹಾಲಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭೀಷೇಕ ಶ್ರೀ ಮಠದ ಹೆಚ್.ಎಂ. ಗಂಗಾಧರಯ್ಯ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೇರವೇರುವುದು ತದನಂತರ ರಾತ್ರಿ 10-30ಕ್ಕೆ ಶ್ರೀಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೇರವೇರುವುದು.

ದಿನಾಂಕ 06-12-2025 ನೇ ಶನಿವಾರ ಬೆಳಿಗ್ಗೆ 10-30 ಕ್ಕೆ ಶ್ರೀ ಹೆಚ್.ಜಿ. ಮೂಗನಗೌಡ್ರು ಇವರ ಮನೆಗೆ ಶ್ರೀಗಳ ಸವಾರಿ ಭಿನ್ನ ಮತ್ತು ತೇಜಿಭಿನ್ನ ತದನಂತರ 
ಸಾಯಂಕಾಲ 4-00 ಗಂಟೆಗೆ 
ಶ್ರೀಗುರು ಹಾಲಸ್ವಾಮಿಯ ಮಹಾರಥೋತ್ಸವ ಜರುಗುವುದು. ತದನಂತರ ರಾತ್ರಿ
"ಕಲಿತಕಳ್ಳ ಸಾಮಾಜಿಕ ನಾಟಕ ಇರುತ್ತದೆ" 

* ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್ತರಿಂದ ನೇರವೇರುವುದು.
ದಾಸೋಹ ಸೇವೆ : ಶ್ರೀ ಸಿ. ಬಸಪ್ಪ (ಗೂಳೆಪ್ಪ) ಜಗಳೂರು ಹೆಚ್.ಕೆ. ಕುಂಟೆ,

ಮುದ್ರಣ ಸೇವೆ : ಶ್ರೀ ವಿರುಪಾಕ್ಷಪ್ಪ ಎ. ಶಿಕ್ಷಕರು, ಜಗಳೂರು ಹೆಚ್.ಕೆ. ಕುಂಟೆ ಯರಿಸ್ವಾಮಿ ಜೋಗಹಳ್ಳಿ (ಉಚ್ಚಯ್ಯದ ಬಿಟ್ಟೆ)

ಅತಿಥಿಗಳು : ಡಾ|| ಎನ್.ಟಿ. ಶ್ರೀನಿವಾಸ್ ಶಾಸಕರು, ಕೂಡ್ಲಿಗಿ ಕ್ಷೇತ್ರ
ಶ್ರೀ ತುಕಾರಾಂ ಲೋಕಾಸಭಾ ಸದಸ್ಯರು, ಬಳ್ಳಾರಿ
ಶ್ರೀ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಅಧ್ಯಕ್ಷರು, ಬಿ.ಡಿ.ಸಿ.ಸಿ. ಬ್ಯಾಂಕ್.

ಶ್ರೀ ಬಿ.ಬಿ. ನಿಂಗಪ್ಪ ಸಂಚಾರ ಸಭಿವೃದ್ಧಿ ಅಧಿಕಾರಿಗಳು, ಶ್ರೀಮತಿ ಚಂದ್ರಮ್ಮ, ಗ್ರಾರು ಪಂತಾಮಸಿ, ಅಧ್ಯಕ್ಷರು

ಗ್ರಾಮದ ಸದಸ್ಯರುಗಳು : ಶ್ರೀ ಟಿ.ಟಿ. ವಿಶ್ವನಾಥಗೌಡ, ಶ್ರೀ ಎಂ. ಸಿದ್ದೇಶ್, ಶ್ರೀಮತಿ ರಾಯಮ್ಮ ಹಾಗೂ ಗ್ರಾಮ ಪಂಚಾಯಿತಿ ಸರ್ವಸದಸ್ಯರು ಸಿಬ್ಬಂದಿ ವರ್ಗ, ಯುವಾ ಬ್ರಿಗೇಡ್, ಸ.ಹಿ.ಪ್ರಾ.ಶಾಲೆಯ ಶಿಕ್ಷಕ ವೃಂದ ಹಾಗೂ ಎಸ್.ಡಿ.ಎಂ.ಸಿ. ಹಿ.ಮ.ನಾ ಪ್ರೌಢ ಶಾಲೆ, ಶಿಕ್ಷಕ ವೃಂದ, ಕೆ.ಪಿ.ಟಿ.ಸಿ.ಎಲ್. ಸಿಬ್ಬಂದಿ ವರ್ಗ, ಹೊಸಹಳ್ಳಿ. ಅರಕ್ಷಕ ಠಾಣೆ ಸಿಬ್ಬಂದಿ ವರ್ಗ, ಹೊಸಹಳ್ಳಿ, ಆರೋಗ್ಯ ಇಲಾಖೆ.

ಗ್ರಾಮದ ಸ್ವ-ಸಹಾಯ ಸಂಘಗಳು ಹಾಗೂ ಹಿರೇಕುಂಬಳಗುಂಟೆ ಮತ್ತು ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಸದ್ಭಕ್ತ ಮಂಡಳಿ

ಸ್ವಾಗತ ಕೋರುವವರು :
ಶ್ರೀ ಹಾಲೇಶ್ವರಸ್ವಾಮಿ ಸೇವಾ ಸಮಿತಿ (ರಿ)

Comments

Popular posts from this blog

ವಿಶ್ವಾರಾಧ್ಯರು - ವಿಶಾಲ ವಿಶ್ವಕ್ಕೆ ಆರಾಧ್ಯರಾಗಲಿ! - ನಾಗರಾಜ್ ಜಿಎಂ

"ಪಂಚಾಕ್ಷರೀ...ಕುಂಟ-ಕುರುಡರ ಕುಬೇರನಪ್ಪಾ ನೀನು!! ಅವರ ದಾರಿಯ ಬೆಳಕಾಗು..ಸಾರ್ಥಕವಾಗಲಿ ನಿನ್ನ ಬದುಕು ಗವಾಯಿ" -  ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರಂತೆ ಆಗಾಗ! ಈ ಮಾತು, ನಮ್ಮ ಪ.ಪೂ.ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಶ್ರೀಗಳನ್ನು ನೋಡಿದಾಗ ನೆನಪಾಗಿಬಿಡುತ್ತದೆ. ಗವಾಯಿಗಳು ಕುಂಟ-ಕುರುಡರ ಕುಬೇರರಾದರೆ, ಈ 'ಮೌನ ಋಷಿ'ಗಳು ಆಡುವ ಮಕ್ಕಳಿಗೆ ಕುಬೇರರು!! ಅವರಿದ್ದೆಡೆ‌ ಮಕ್ಕಳ ಕಲರವ. ಅವರ ತೊಡೆಯ ಮೇಲೆ ಹಾಲುಗೂಸಿನ ಕಿಲಕಿಲದ ನಗು!! ಅವರಿದ್ದೆಡೆ ಶಾಂತಿಯ ಪಾರಿವಾಳಗಳು ಹಾರಾಡುತ್ತವೆ...ತುಂಟ ಗಿಳಿಗಳು ತೊದಲಾಡುತ್ತವೆ.ನವಿಲು ಗರಿಬಿಚ್ಚಿ ಕುಣಿಯುತ್ತದೆ. ಅಯ್ಯೋ...ಅವರು ಕೂತ ಕಡೆ ತಂಗಾಳಿಯೇ ತಲೆಬಾಗಿ ಬೀಸುತ್ತದೆ. In fact ಅವರೂ ಕೂಡ ಮಗುವಿನಂಥವರು.  ಇವರಿಗೆ ವಯಸ್ಸಾಗುವುದಿಲ್ಲ..ಅವರೆಂದಿಗೂ ಬಾಲ್ಯದ ಹಸುಳೆಯ ಮನಸ್ಸು ಹೊತ್ತೇ ಬದುಕುತ್ತಾರೇನೋ ಅನಿಸುತ್ತದೆ.ಅವರು ಯಾವತ್ತೂ ಕೋಪಿಸಿಕೊಂಡದ್ದು ನೋಡಿಲ್ಲ. ಈ ಜಮಾನದ ಜನರ ಮನಃಸ್ಥಿತಿಗಳ ಅದಃಪತನವನ್ನು ನೋಡಿ, ನಮ್ಮಂಥವರಿಗೆ ರೇಜಿಗೆ ಹುಟ್ಟುತ್ತದೆ..ಆದರೆ, ಅವರು ಅಂಥವರನೆಲ್ಲಾ ನಿರ್ಲಿಪ್ತರಾಗಿ ನೋಡುತ್ತಿರುತ್ತಾರೆ. ಯಾರನ್ನೂ ದೂಷಿಸಿಸಿದ್ದನ್ನು ನಾನು ಕೇಳಿಲ್ಲ. Even ತಮ್ಮ ಬಗ್ಗೆ ಮಾತಾಡಿದವರನ್ನೂ ಕೂಡ!! ಯಾವ ಜಾತಿ-ಧರ್ಮ,ಇದ್ದವ-ಇಲ್ಲದವ ಎಂಬ ಬೇಧ ಮಾಡದೆ ಎಲ್ಲರನ್ನೂ ಅದೇ ಮೃದು ಮಾತಿನಿಂದ ಸಂತೈಸುತ್ತಾರೆ.  ವಿಶ...

Hirekumbalagunte Halaswamiji 19th Jatra Mahotsava-2024|ಹಿರೇಕುಂಬಳಗುಂಟೆ ಹಾಲಸ್ವಾಮಿಜೀ 19ನೇ ಜಾತ್ರ ಮಹೋತ್ಸವ-2024

ದಿನಾಂಕ: 4-12-2024 ರಂದು  ಹಿರೇಕುಂಬಳಗುಂಟೆ ಗ್ರಾಮಸ್ಥರು ಸೇರಿ ಹಿರೇಹಡಗಲಿ ಗ್ರಾಮಕ್ಕೆ ಬಂದು ಜಾತ್ರೆಗೆ ಆಹ್ವಾನ ನೀಡಿದರು. ದಿನಾಂಕ: 6-12-2024 ರಂದು ಶ್ರೀ ಗುರು ಹಾಲಸ್ವಾಮಿಯ 11 ದಿನದ ರಣಗಾಂಭ ಪೂಜೆಯನ್ನು ಮಾಡಲಾಯಿತು. ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಹಿರೇಕುಂಬಳಗುಂಟೆ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ 19ನೇ ವರ್ಷದ ಜಾತ್ರಾ ಮಹೋತ್ಸವದ "ಆಹ್ವಾನ ಪತ್ರಿಕೆ" ದಿನಾಂಕ:- 15-12-2024 ನೇ ಭಾನುವಾರ ಶ್ರೀಗುರು ಹಾಲಸ್ವಾಮಿಜೀಯ ಮಹಾಕಾರ್ತಿಕೋತ್ಸವ   ದಿನಾಂಕ: 16-12-2024 ನೇ ಸೋಮವಾರ ಬೆಳಗ್ಗೆ ಶ್ರೀಗುರು ಹಾಲಸ್ವಾಮಿಜೀ ಕರ್ತೃ ಗದ್ದುಗಿಗೆ ಮಹಾರುದ್ರಾಭೀಷೇಕ: ಶ್ರೀ ಹೆಚ್.ಎಂ.ಗಂಗಾದಾಧರಯ್ಯ ಮತ್ತು ಶ್ರೀ ಹೆಚ್.ಎಂ.ಪ್ರಕಾಶ,ಭಾಗಳಿ ಹಾಗೂ ಗ್ರಾಮದ ಸಕಲ ಸದ್ಭಕ್ತರಿಂದ ನೆರವೇದುವುದು. ತದನಂತರ ರಾತ್ರಿ 10:30ಕ್ಕೆ ಶ್ರೀ ಸ್ವಾಮಿಯ ಮುಳ್ಳುಗದ್ದುಗೆ ಮಹೋತ್ಸವ ನೆರವೇರುವುದು.  ದಿನಾಂಕ:- 17-12-2024 ನೇ ಮಂಗಳವಾರ ಬೆಳಗ್ಗೆ 10-30ಕ್ಕೆ ಹೆಚ್.ಜಿ.ಸತೀಶ್‌ಗೌಡ್ರು ಇವರ ಮನೆಗೆ ಶ್ರೀಗಳ ಸವಾರಿಜನ್ನ ಮತ್ತು ತೇಜಜನ್ನ. ತದನಂತರ ಸಾಯಂಕಾಲ 4-00 ಗಂಟೆಗೆ ಶ್ರೀ ಗುರು ಹಾಲಸ್ವಾಮಿಜೀ ಮಹಾರಥೋತ್ಸವ ಜರಗುವುದು. * ಈ ಎಲ್ಲಾ ಕಾರ್ಯಕ್ರಮಗಳು ಹಿರೇಕುಂಬಳಗುಂಟೆ ಗ್ರಾಮ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಸಮಸ್ತ ಸದ್ಭಕ್...