"ಪಂಚಾಕ್ಷರೀ...ಕುಂಟ-ಕುರುಡರ ಕುಬೇರನಪ್ಪಾ ನೀನು!! ಅವರ ದಾರಿಯ ಬೆಳಕಾಗು..ಸಾರ್ಥಕವಾಗಲಿ ನಿನ್ನ ಬದುಕು ಗವಾಯಿ" - ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಹಾನಗಲ್ ಕುಮಾರಸ್ವಾಮಿಗಳು ಹೇಳುತ್ತಿದ್ದರಂತೆ ಆಗಾಗ! ಈ ಮಾತು, ನಮ್ಮ ಪ.ಪೂ.ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಶ್ರೀಗಳನ್ನು ನೋಡಿದಾಗ ನೆನಪಾಗಿಬಿಡುತ್ತದೆ. ಗವಾಯಿಗಳು ಕುಂಟ-ಕುರುಡರ ಕುಬೇರರಾದರೆ, ಈ 'ಮೌನ ಋಷಿ'ಗಳು ಆಡುವ ಮಕ್ಕಳಿಗೆ ಕುಬೇರರು!! ಅವರಿದ್ದೆಡೆ ಮಕ್ಕಳ ಕಲರವ. ಅವರ ತೊಡೆಯ ಮೇಲೆ ಹಾಲುಗೂಸಿನ ಕಿಲಕಿಲದ ನಗು!! ಅವರಿದ್ದೆಡೆ ಶಾಂತಿಯ ಪಾರಿವಾಳಗಳು ಹಾರಾಡುತ್ತವೆ...ತುಂಟ ಗಿಳಿಗಳು ತೊದಲಾಡುತ್ತವೆ.ನವಿಲು ಗರಿಬಿಚ್ಚಿ ಕುಣಿಯುತ್ತದೆ. ಅಯ್ಯೋ...ಅವರು ಕೂತ ಕಡೆ ತಂಗಾಳಿಯೇ ತಲೆಬಾಗಿ ಬೀಸುತ್ತದೆ. In fact ಅವರೂ ಕೂಡ ಮಗುವಿನಂಥವರು. ಇವರಿಗೆ ವಯಸ್ಸಾಗುವುದಿಲ್ಲ..ಅವರೆಂದಿಗೂ ಬಾಲ್ಯದ ಹಸುಳೆಯ ಮನಸ್ಸು ಹೊತ್ತೇ ಬದುಕುತ್ತಾರೇನೋ ಅನಿಸುತ್ತದೆ.ಅವರು ಯಾವತ್ತೂ ಕೋಪಿಸಿಕೊಂಡದ್ದು ನೋಡಿಲ್ಲ. ಈ ಜಮಾನದ ಜನರ ಮನಃಸ್ಥಿತಿಗಳ ಅದಃಪತನವನ್ನು ನೋಡಿ, ನಮ್ಮಂಥವರಿಗೆ ರೇಜಿಗೆ ಹುಟ್ಟುತ್ತದೆ..ಆದರೆ, ಅವರು ಅಂಥವರನೆಲ್ಲಾ ನಿರ್ಲಿಪ್ತರಾಗಿ ನೋಡುತ್ತಿರುತ್ತಾರೆ. ಯಾರನ್ನೂ ದೂಷಿಸಿಸಿದ್ದನ್ನು ನಾನು ಕೇಳಿಲ್ಲ. Even ತಮ್ಮ ಬಗ್ಗೆ ಮಾತಾಡಿದವರನ್ನೂ ಕೂಡ!! ಯಾವ ಜಾತಿ-ಧರ್ಮ,ಇದ್ದವ-ಇಲ್ಲದವ ಎಂಬ ಬೇಧ ಮಾಡದೆ ಎಲ್ಲರನ್ನೂ ಅದೇ ಮೃದು ಮಾತಿನಿಂದ ಸಂತೈಸುತ್ತಾರೆ. ವಿಶ...